ವರುಷ, ವರುಷವೂ ದೀಪಾವಳಿ ಬರುತ್ತಿದೆ, ಜತೆಯಲ್ಲಿ ತರುತಿದೆ ಸಂತಸ, ಸಂಭ್ರಮ. ಪಟಾಕಿ, ಬಾಣ, ಬಿರುಸುಗಳನ್ನು ಹಾರಿಸಿ ಆಗಸದಲ್ಲಿ ಬಣ್ಣಗಳ ಚಿತ್ತಾರವನ್ನು ಮೂಡಿಸಿ ಸಂತೋಷ, ಸಡಗರದಿಂದ ಜನರು ನಲಿಯುತ್ತಾರೆ. ಆದರೆ ದೀಪಾವಳಿ ಬೆಳಕಿನ ಹಬ್ಬದಲ್ಲಿ ಅನೇಕ ಮಕ್ಕಳು ಕಣ್ಣು ಕಳೆದುಕೊಂಡು ಶಾಶ್ವತವಾಗಿ ಕವಿದ ಕತ್ತಲಾಗಿ ದುಃಖದಲ್ಲಿ ಮುಳುಗಿದ ನಿದರ್ಶನಗಳೂ ಇವೆ.ಹೀಗಾಗಿ ಪಟಾಕಿ ಹೊಡೆಯುವ ಮುನ್ನ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕಾಗುತ್ತದೆ.